5 ways to handle loneliness

Last week, I discussed about 5 benefits of having a schedule. If you haven't read it, please check it out. This week, I am discussing about different ways in which we can handle loneliness and avoid getting into depression. As per my personal experience, I have found 5 ways in which we can handle loneliness. … Continue reading 5 ways to handle loneliness

Advertisements

5 benefits of having a schedule

Last week, I discussed about an app called 'timetune app'. If you haven't read it yet, you can Click here. Why do we need a schedule? Do you know Elon musk? He is a billionaire businessman. He owns two companies Tesla and SpaceX. He manages two companies!! He also finds time to spend with his family. He … Continue reading 5 benefits of having a schedule

Timetune app: A Review

All these days, I thought having a routine is very confining, constraining, suffocating, etc. But, I was wrong. Working with a structured routine is like taking a journey to a particular destination. Whereas, A life without a routine is just wandering. Time management was always my real issue. So, I tried several time management apps, … Continue reading Timetune app: A Review

ಜೂನ್ 3, 2019

ನಮ್ಮಪ್ಪ ಯಾವಾಗಲೂ ನನಗೆ ಬೈಯ್ಯುತ್ತಿರುತ್ತಾರೆ,  “ನಿನಗೆ ಸೂಕ್ಷ್ಮಗಳೇ ಅರ್ಥ ಆಗೋದಿಲ್ಲ ಕಣೋ! ನೀನಿನ್ನೂ ಚಿಕ್ಕ ಹುಡುಗನಾಗೇ ಇದ್ದೀಯ.” ಅಂತ. ನನ್ನ ತಂಗಿನೂ ಇದೇ ರೀತಿ ಎಷ್ಟೋ ಸಲ ಅಂದಿದ್ದಾಳೆ. "ಅಣ್ಣ! ನಿನಗೆ ಸೂಕ್ಷ್ಮಗಳೇ ಅರ್ಥ ಆಗೋದಿಲ್ಲ ಕಣೋ!" ಅಂತ. ಆ “ಸೂಕ್ಷ್ಮ” ಗಳನ್ನ ಅರ್ಥ ಮಾಡಿಕೊಳ್ಳೋದು ಹಾಗಿರಲಿ. ಆ ‘ಸೂಕ್ಷ್ಮ’ ಅಂದರೆ ಏನು ಎಂದೇ ನನಗಿನ್ನೂ ಅರ್ಥ ಆಗಿಲ್ಲ! ನನಗನ್ನಿಸುತ್ತೆ, ಈ ಮದುವೆ ಆಗಿ ಅದೇನೋ, “ಸಂಸಾರ ನಿಭಾಯಿಸೋದು” ಅಂತಾರಲ್ಲ, ಅದಕ್ಕೆ ಈ “ಸೂಕ್ಷ್ಮಗಳು” ಅನ್ನೋದು ಬಹಳಾ … Continue reading ಜೂನ್ 3, 2019

ಪ್ರಕಾಶ್ ರೈ ಯವರೇ…

ಪ್ರಕಾಶ್ ರೈ ಯವರೇ.. ನಿಮಗೆ ನಿಜವಾಗಿಯೂ ಜನಸೇವೆ ಮಾಡಬೇಕು ಎಂಬ ಆಸೆ ಇದ್ದರೆ, ಈ ಕ್ಯಾನ್ವಾಸೆಂದು ಊರೆಲ್ಲಾ ಸುತ್ತಿ ‘ಮಂಡಿ’ ನೋವು ಮಾಡಿ ಕೊಳ್ಳುವುದರ ಬದಲು, ಯಾರಾದರೂ ಮನೋ ವೈದ್ಯರ ಬಳಿ ನಿಮ್ಮ ‘ಮಂಡೆ’ ನೋಡಿಸಿಕೊಳ್ಳಿ! ಅದೇ ನೀವು ನಮಗೆ ಮಾಡುವ ಉಪಕಾರ. ಸದ್ಯದ ಪರಿಸ್ಥಿತಿಯಲ್ಲಿ ನಿಮಗೆ ಬೇಕಾಗಿರುವುದು ಬರೀ ‘ಮತ’ ಅಲ್ಲ. ನಿಮ್ಮ ಮಂಡೆ ನೋಡುವ ವೈದ್ಯರು, ನಿಮ್ಮ ಮಾನಸಿಕ ಸ್ವಾಸ್ಥ್ಯದ ಬಗ್ಗೆ, ಮತ್ತು ಅದರಿಂದಾಗಿ ಹಾಳಾಗುತ್ತಿರುವ ಸಮಾಜದ ಸ್ವಾಸ್ಥ್ಯದ ಬಗ್ಗೆ ಅವರು ಕೊಡುವ ‘ಅಭಿಮತ’. … Continue reading ಪ್ರಕಾಶ್ ರೈ ಯವರೇ…

ಮನೆ

ಆಫೀಸ್ ಕೆಲಸ ಮುಗಿಸಿ ಮನೆಯ ಕಾಲಿಂಗ್ ಬೆಲ್ ಒತ್ತಿದೆ. ಓಡಿ ಬಂದ ನನ್ನ ಆರು ವರ್ಷದ ಮಗಳು, “ಪಪ್ಪಾ!” ಎಂದು ಕೂಗುತ್ತಾ, ಬಾಗಿಲು ತೆರೆದಳು. ಅವಳು ಪಪ್ಪಾ! ಎನ್ನಬೇಕು, ನಾನು ಬಾಗಬೇಕು, ಅವಳು ನನ್ನ ಕೆನ್ನೆಗೆ ಒಂದು ಪಪ್ಪಿ ಕೊಡಬೇಕು, ನಾನು ಅವಳಿಗೊಂದು ‘ಚಾಕಿ’  ಕೊಡಬೇಕು. ಅದಾಗದೆ, ನನಗೆ ಒಳ ಪ್ರವೇಶವಿಲ್ಲ. ಅದೆಂತಾ ಸುಸ್ತೇ ಇರಲಿ. ಆ ಒಂದು ‘ಪಪ್ಪಿ’ಯ ಎದುರು ಯಾವ ಜಂಡು ಬಾಮು ಏನೂ ಅಲ್ಲ. ಲಿವಿಂಗ್ ರೂಮಲ್ಲಿ,  ಸೋಫಾ ಮೇಲೆ ಅಪ್ಪ ದಿನಪತ್ರಿಕೆ … Continue reading ಮನೆ

ಯಮಲೋಕದಲ್ಲಿ ಹಿಟ್ಲರ್

  ಬಹಳ ಹೊತ್ತು ಯೋಚಿಸಿದ ಹಿಟ್ಲರ್ ಒಂದು ಅಂತಿಮ ತೀರ್ಮಾನಕ್ಕೆ ಬಂದ. ಒಂದು ದೀರ್ಘ ಶ್ವಾಸವನ್ನು ಎಳೆದುಕೊಂಡು, ಸೈನೈಡ್ ಗುಳಿಗೆಯೊಂದನ್ನು ಬಾಯಿಗೆ ಹಾಕಿಕೊಂಡು, ಅದೇ ಸಮಯಕ್ಕೆ ಶಾಟ್ ಗನ್ ನ್ನು  ಹಣೆಗೆ ಇಟ್ಟುಕೊಂಡು ಟ್ರಿಗ್ಗರ್ ಅಮುಕಿದ. ಅದೇ ಸಮಯದಲ್ಲಿ... ಭೂಲೋಕದಿಂದ ಕೋಟ್ಯಾಂತರ ಮೈಲು ದೂರದಲ್ಲಿ... ಯಮಪುರಿಯಲ್ಲಿ... ಒಬ್ಬ ವ್ಯಕ್ತಿ ತನ್ನ ಮುಂದಿದ್ದ ಪರದೆಯನ್ನು ಎವೆಯಿಕ್ಕದೆ ನೋಡುತ್ತಿದ್ದಾನೆ. ರಸ್ತೆಯಲ್ಲಿ ನಿಂತಿದ್ದ ಪುಂಡಹುಡುಗರು  ಹುಡುಗಿಯೊಬ್ಬಳನ್ನು ಅಣಕಿಸಿ ಅಟ್ಟಹಾಸದಿಂದ ನಕ್ಕಿದ್ದು, ಕುಡಿದು ಬಂದ ಗಂಡ ತನ್ನ ಹೆಂಡತಿಗೆ ಬಾಸುಂಡೆ ಬರುವಂತೆ ಹೊಡೆದಿದ್ದು, … Continue reading ಯಮಲೋಕದಲ್ಲಿ ಹಿಟ್ಲರ್

ರಾಕ್ಷಸನ್ (2018): ಚಿತ್ರ ವಿಮರ್ಶೆ

ಚಿತ್ರ ನಿರ್ದೇಶಕ ಆಗಬೇಕು ಎನ್ನುವುದು ಅವನ ಹನ್ನೆರಡು ವರ್ಷಗಳ ಕನಸು. ಆದರೆ ಪರಿಸ್ಥಿತಿಯ ಒತ್ತಡದಿಂದಾಗಿ, ತನ್ನ ತಂದೆಯ ಸಾವಿನ ನಂತರ ಸಿಕ್ಕ ಸಬ್ ಇನ್ಸ್ ಪೆಕ್ಟರ್ ಹುದ್ದೆಯನ್ನು ಸ್ವೀಕರಿಸುತ್ತಾನೆ. ಇವನು ಕೆಲಸಕ್ಕೆ ಸೇರಿದ ಅದೇ ದಿನಗಳಲ್ಲಿ, ಆ ಊರಿನಲ್ಲಿ ನಿಗೂಢ ಮತ್ತು ಬರ್ಬರವಾದ ರೀತಿಯಲ್ಲಿ ಸ್ಕೂಲ್ ಹುಡುಗಿಯರ ಸರಣಿ ಕೊಲೆಗಳು ನಡೆಯುತ್ತವೆ. ಮೊದಮೊದಲು ಇವೆಲ್ಲಾ ಒಂದಕ್ಕೊಂದು ಸಂಬಂಧವಿಲ್ಲದ ಕೊಲೆಗಳು ಎನಿಸಿದರೂ, ಕೊಲೆ ಮಾಡುವ ರೀತಿ, ಅವುಗಳಲ್ಲಿನ ಸಾಮ್ಯತೆ ಇದೆಲ್ಲಾ ಒಬ್ಬನದ್ದೇ ಕೆಲಸ ಎಂದು ತಿಳಿಯುತ್ತದೆ. ಆದರೆ ಆ … Continue reading ರಾಕ್ಷಸನ್ (2018): ಚಿತ್ರ ವಿಮರ್ಶೆ

ಎಲ್ಲರ ಕಾಲೆಳೆಯುತ್ತದೆ ಕಾಲ

ಒಂದೂರಲ್ಲಿ ಒಬ್ಬ ಮನುಷ್ಯ ಇದ್ದ. ಸಾಮಾನ್ಯವಾಗಿ ಊರು ಅಂದ ಮೇಲೆ ಸುಮಾರು ಜನ ಇರುತ್ತಾರೆ. ನನ್ನ ಅನುಕೂಲಕ್ಕೋಸ್ಕರ ಹೀಗೆ ಬರೆದಿದ್ದೇನೆ ಅಷ್ಟೇ. ಈ ವ್ಯಕ್ತಿಗೆ ಚಿಕ್ಕಂದಿನಿಂದಲೂ ವೃತ್ತಿ ಜೀವನದಲ್ಲಿ ಸಾಧನೆಯ ಗೌರಿಶಂಕರ ಏರಬೇಕೆಂಬ ಆಸೆ. ತನ್ನ ಇಡೀ ಜೀವನ ಯಾವ ರೀತಿ ನಡೆಯಬೇಕು ಎಂದು ಪ್ಲಾನ್ ಮಾಡಿದ್ದ. ಎಲ್ಲಿಯವರೆಗೆಂದರೆ, ತಾನು ನಿವೃತ್ತಿ ಹೊಂದಿದಮೇಲೆ ಏನೇನು ಮಾಡಬೇಕು ಎಂದು ಅದಾಗಲೇ ಬರೆದಿಟ್ಟಿದ್ದ. ತಪ್ಪೇನೂ ಇಲ್ಲ. ಎಲ್ಲಾ ತಾನಂದುಕೊಂಡಂತೆ ನಡೆಯುತ್ತಿದೆ ಅಂದು ಇವನಂದುಕೊಂಡಿದ್ದ.   ನಾವಂದುಕೊಂಡ ಹಾಗೆ ಜೀವನ ನಡೆಯುವ ಹಾಗಿದ್ದರೆ … Continue reading ಎಲ್ಲರ ಕಾಲೆಳೆಯುತ್ತದೆ ಕಾಲ

ಕೈ ಗಡಿಯಾರ

ಒಂದು ಊರಿನಲ್ಲಿ ಒಬ್ಬ ಹುಡುಗನಿದ್ದ. ಅವನಿಗೆ ಕೈಗಡಿಯಾರಗಳ ಮೇಲೆ ವಿಪರೀತ ವ್ಯಾಮೋಹ. ಅವನ ಬಳಿ ಬಹುಶಃ ಡಜನ್ ಗಟ್ಟಲೆ  ಕೈಗಡಿಯಾರಗಳಿದ್ದಿರಬೇಕು. ಆದರೂ ಅವನಿಗೆ ತೃಪ್ತಿ ಇರಲಿಲ್ಲ. ಅದೊಂದು ಬ್ರಾಂಡ್ ನ ವಾಚು ತನ್ನ ಬಳಿ ಇಲ್ಲವಲ್ಲ ಎಂದು ಕೊರಗುತ್ತಿದ್ದ. ಆ ವಾಚಿಗಾಗಿ ಅವನು ಅಲೆದಾಡದ ವಾಚ್ ಷೋರೂಮುಗಳು ಇರಲಿಲ್ಲ. ಆದರೆ ಎಲ್ಲೂ ಕೂಡ ಆ ವಾಚು ಸಿಗಲಿಲ್ಲ. ಹೀಗೆ ಆತ ಒಂದು ನಡೆದುಕೊಂಡು ಅದೆಲ್ಲಿಗೋ ಹೋಗುತ್ತಿದ್ದ. ಅದೆಲ್ಲೋ ಒಂದು ಕಡೆ ತುಂಬಾ ಜನ ಸೇರಿದ್ದರು. ಇವನೂ ಕೂಡ … Continue reading ಕೈ ಗಡಿಯಾರ